Jun 25, 2012

ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ 'ಕನ್ನಡದ ಕೋಟ್ಯಾಧಿಪತಿ'


ಯಾವ ಕನ್ನಡಿಗನಿಗೆ ತಾನೇ ಹೆಮ್ಮೆಯಾಗುವುದಿಲ್ಲ?

ಹಿಂದಿಯ 'ಕೌನ್ ಬನೇಗ ಕರೋಡ್ ಪತಿ'ಗೆ ಕನ್ನಡತನವನ್ನ, ಕರ್ನಾಟಕದ ಜನರ ಕಷ್ಟಗಳಿಗೆ ಸ್ಪಂದಿಸುವ 'ಮಾನವೀಯತೆ'ಯನ್ನ ಹೊತ್ತು ನಮಗೆ ನೀಡುತ್ತಿರುವ 'ಕನ್ನಡದ ಕೋಟ್ಯಾಧಿಪತಿ'ಯನ್ನು ನೋಡಿದರೆ ಯಾವ ಕನ್ನಡಿಗನಿಗೆ ತಾನೇ ಹೆಮ್ಮೆಯಾಗುವುದಿಲ್ಲ?

ಸಾಕಷ್ಟು ದಿನಗಳಿಂದ ದುಬಾರಿ ಬೆಂಗಳೂರಲ್ಲಿ ಸಣ್ಣ ಮನೆಯನ್ನು ಮಾಡಬೇಕು ಎಂಬ ಮಹದಾಸೆಯಿರುವ ಸ್ನೇಹಿತನೊಬ್ಬನಿಗೆ 'ನೀನ್ಯಾಕೆ ಕನ್ನಡದ ಕೋಟ್ಯಾಧಿಪತಿ ಅವಕಾಶಕ್ಕೆ ಪ್ರಯತ್ನಿಸಬಾರದು?' ಅಂತ ತಮಾಷೆಗೆ ಕೇಳಿದ್ದಕ್ಕೆ ಅವನು 'ನಾನ್ಯಾಕ್ ಮಾರಾಯ? ಆ ದೇವರ ಕೃಪೆಯಿಂದ ನನ್ನ ಹಣದ ಅವಶ್ಯಕತೆಗಳನ್ನ ಪೂರೈಸಿ ಕೊಳ್ಳುವುದಕ್ಕೆ ದುಡಿಯುವ ಸಾಮರ್ಥ್ಯವನ್ನ ಕೊಟ್ಟಿದಾನೆ. ತಕ್ಷಣದಲ್ಲಿ ಲಕ್ಷಾಂತರ ರೂಪಾಯಿಗಳ ಅನಿವಾರ್ಯತೆಗಳಿಲ್ಲ ನನಗೆ. ಆದರೆ ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿರುವ, ದಿನದ ಹೊಟ್ಟೆ ಪಾಡಿಗೂ ಕಷ್ಟ ಪಡುತ್ತಿರುವ ಎಷ್ಟೋ ಜನರಿಗೆ ಅವಕಾಶ ಸಿಗುತ್ತಿರುವ ನಮ್ಮ 'ಕನ್ನಡ ದ ಕೋಟ್ಯಾಧಿಪತಿ' ಕಾರ್ಯ ಕ್ರಮಕ್ಕೆ ನಮ್ಮಂತಹವರು ಪ್ರಯತ್ನಿಸುವುದು ನನಗೆ ಸರಿ ಕಾಣೋಲ್ಲ. ಅಂತಹವರು ಮಾತ್ರ ಅಲ್ಲಿಗೆ ಬರುವಂತಾಗಬೇಕು. ಅದೇ ನನ್ನ ಹಾರೈಕೆ' ಅಂದಾಗ, ಛೆ, ನನಗು ಯಾಕೆ ಹಾಗನ್ನಿಸುವುದಿಲ್ಲ? ನನಗೆ ಯಾಕೆ ಇಷ್ಟು ಒಳ್ಳೆ ಮನಸ್ಸಿಲ್ಲ ಅಂತ ಬೇಸರವಾಯಿತು.

'ಸೆಲೆಬ್ರಿಟಿ' ಸುತ್ತುಗಳಲ್ಲಿ ಗಣ್ಯರನ್ನ ಕರೆಸಿ ಅವರ ಕೈಗಳಿಂದಲೂ  ಅವರು ಗೆದ್ದ ಹಣವನ್ನೂ ಒಳ್ಳೆಯ ಉದ್ದೇಶಗಳಿಗೆ ವಿನಿಯೋಗಿಸುವ ಪ್ರೇರಣಾ ದಾಯಿ ಕಾರ್ಯಕ್ರಮ ನಮ್ಮ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗ್ತಿದೆ ಅಂತ ಹೇಳಿಕೊಳ್ಳಲಿಕ್ಕೆ ಖುಷಿಯಾಗುತ್ತೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಕಿರುಪರಿಚಯದ ವೀಡಿಯೊ ಮುಖಾಂತರ  ಅವರ ಗೆಲ್ಲುವ ಹಣದ ಸದ್ವಿನಿಯೋಗದ ಕುರಿತಾದ ಮಾಹಿತಿಯನ್ನೂ ನೀಡಿ ವೀಕ್ಷಕರ ಹೃದಯ ಮುಟ್ಟುವಂತಹ ಪ್ರಯತ್ನಕ್ಕೆ ನಮ್ಮದೊಂದು ಸಲಾಂ.
ಬಹುಶಃ ಪುನೀತ್ ರಾಜ್ ಕುಮಾರ್ ರವರು ಚಿತ್ರಗಳನ್ನು ಮಾಡಿರುವುದಕ್ಕಿಂತ ಹೆಚ್ಚಾಗಿ ಜನರ ಮನಸ್ಸನ್ನು ತಲುಪಲು 'ಕನ್ನಡದ ಕೋಟ್ಯಾಧಿಪತಿ' ಎಂಬ 'ಮಾಧ್ಯಮ' ಕಾರಣವಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ ಪುನೀತ್ ರವರು ನಟಸಾರ್ವಭೌಮ ಡಾ||ರಾಜ್ ಕುಮಾರ್ ರವರ ಮಗನಾಗಿರುವುದರಿಂದಲೇ ಇಡೀ ಕುಟುಂಬದ ಮೇಲಿನ ಶ್ರಧ್ಧಾ-ಗೌರವಗಳು ಇಮ್ಮಡಿಗೊಳ್ಳಲು ಈ 'ಕನ್ನಡದ ಕೋಟ್ಯಾಧಿಪತಿ' ಕಾರಣಗುತ್ತಿದೆ ಎಂದರೆ ಹೆಚ್ಚು ಸರಿಯಾಗಬಹುದೇನೋ.


ಆದರೆ ಬಹುಮಾನರೂಪಿ ಹಣ ಮತ್ತು ಅದರ ಪ್ರಮಾಣದ ಕಾರಣಕ್ಕೆ ಇದನ್ನು ನೋಡಿದ ಬಹುಪಾಲು ವೀಕ್ಷಕರಿಗೆ ಇದೆಲ್ಲ ಸುಳ್ಳು,ಕಾರ್ಯಕ್ರಮದ ಪ್ರಚಾರಕ್ಕೆ ಎಂಬೆಲ್ಲ ಅಭಿಪ್ರಾಯ ಬರುವುದು ಸಹಜ. 

ಅದು ಸುಳ್ಳಾಗದಿರಲಿ ಎಂಬ ಆಶಯ ಎಲ್ಲರ ಪರವಾಗಿ ನಮ್ಮದು.



3 comments:

  1. http://kannada.oneindia.in/movies/tv/2012/06/why-should-you-not-participate-kannadada-kotyadhipati-066284.html

    ReplyDelete
  2. ಎಂದಿನಂತೆ ಉತ್ತಮ ಬರವಣಿಗೆ.
    "ಅದು ಸುಳ್ಳಾಗಿರಲಿ ಎಂಬ ಆಶಯ ಎಲ್ಲರ ಪರವಾಗಿ ನಮ್ಮದು" :-
    ಈ ವಾಕ್ಯ ಅರ್ಥವಾಗುವವರೆಗೆ ಸ್ವಲ್ಪ ಗಲಿಬಿಲಿ ಉಂಟುಮಾಡುತ್ತದೆ.
    ಕಾರ್ಯಕ್ರಮದ ಪ್ರಚಾರಕ್ಕೆ ಎಂಬ ಅಭಿಪ್ರಾಯ ಸುಳ್ಳಾಗಿರಲಿ ಎಂಬುದು ನಿಮ್ಮ ಬರವಣಿಗೆಯ ಅರ್ಥ.
    ಆದರೆ ಆ ಸ್ಥಳದಲ್ಲಿ ಅದು "ಸುಳ್ಳಾಗದಿರಲಿ"(ಕಾರ್ಯಕ್ರಮ ಮತ್ತು ಅದರ ಬಹುಮಾನ) ಎಂದು ಉಲ್ಲೇಖಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ನನ್ನ ಅನಿಸಿಕೆ.

    ReplyDelete
  3. ಆತ್ಮೀಯ ಸಂಜಯ್ ,

    ನಿಮ್ಮ ಸಲಹೆ ಗೆ ಧನ್ಯವಾದಗಳು. ಸರಿಪಡಿಸಿದ್ದೇನೆ .

    ReplyDelete