Jan 19, 2010

'ವನವಾಸಿ ಬಂಧು'ಗಳ ಕಲ್ಯಾಣ : ನಮ್ಮದೇ ಕರ್ತವ್ಯ


ಸಾಕಷ್ಟು ಆಧುನಿಕ ವ್ಯವಸ್ಥೆಗಳನ್ನು ಹಾಗು ಆಧುನಿಕ ಸವಲತ್ತುಗಳನ್ನು ಅನುಭವಿಸುತ್ತಿರುವ ನಾವೆಷ್ಟೋ ಮಂದಿ ಸಮಾಜಕ್ಕೆ ಏನಾದರೂ ಮಾಡುವುದಿರಲಿ ಅದರ ಬಗೆಗೆ ಯೋಚನೆ ಕೂಡ ಮಾಡುವುದಿಲ್ಲ. ಆದರೆ ಯಾವುದೇ ಮೂಲಭೂತ ಸೌಕರ್ಯಗಳ ವಾಸನೆಯೂ ಇಲ್ಲದೆ, ಅಕ್ಷರಶಃ ಕಾಡುಗಳಲ್ಲಿ, ಜೀವನ ಸಾಗಿಸುತ್ತಿರುವ ಸರಿಸುಮಾರು 10 ಕೋಟಿ ಜನ ನಮ್ಮ ಭಾರತೀಯರಿದ್ದಾರೆ ಎನ್ನುವುದು ನಂಬಲಸಾಧ್ಯವಾದರೂ ಸತ್ಯ!

'ವನವಾಸಿ ಬಂಧು'ಗಳು ಎಂದು ಗುರುತಿಸಬಹುದಾದ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಅಹರ್ನಿಶಿ ಕೆಲಸ ಮಾಡುತ್ತಿರುವ 'ವನವಾಸಿ ಕಲ್ಯಾಣ' ಎಂಬ ಸಾಮಾಜಿಕ ಸಂಸ್ಥೆ ಸದ್ದಿಲ್ಲದೇ ವನವಾಸಿ ಬಂಧುಗಳ ಏಳಿಗೆಗೋಸ್ಕರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಾಮಾಜಿಕ ಸಂಸ್ಥೆ ಬೆಂಗಳೂರಿನ ರಾಜಾಜಿನಗರದಲ್ಲಿದೆ.

ವನವಾಸಿ ಬಂಧುಗಳ ಶಿಕ್ಷಣಕ್ಕಾಗಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ತರಬೇತಿ ಕೇಂದ್ರಗಳು, ವೈದ್ಯಕೀಯ ಚಿಕಿತ್ಸಾ ಶಿಬಿರಗಳು ಹಾಗು ಇನ್ನು ಹಲವಾರು ಚಟುವಟಿಕೆಗಳಲ್ಲಿ ಮಗ್ನವಾಗಿದೆ. ಆದರೆ ಇವುಗಳನ್ನೆಲ್ಲ ಯಾವುದೇ ಪತ್ರಿಕೆಗಳ ಮುಂದಾಗಲೀ ಅಥವಾ ಟಿವಿ ಚಾನೆಲ್ ಗಳ ಮುಂದಾಗಲೀ ಹೇಳಿಕೊಂಡಿಲ್ಲ. ಕಾರಣ ಇವೆಲ್ಲವುಗಳ ಹಿಂದಿನ ಉದ್ದೇಶ ಪವಿತ್ರ ದೇಶಭಕ್ತಿಯೇ ಹೊರತು ಪ್ರಸಿದ್ಧಿಯಾಗಲೀ ಪ್ರಚಾರವಾಗಲೀ ಅಲ್ಲ.

ಈ ಎಲ್ಲ ಪವಿತ್ರ ಕಾರ್ಯಗಳಿಗೋಸ್ಕರ ಮಹಿಳೆಯರ ಸಹಿತ ಸಾವಿರಾರು ಮಂದಿ ಪೂರ್ಣಾವಧಿ ಕಾರ್ಯಕರ್ತರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ವನವಾಸಿ ಬಂಧುಗಳ ಶ್ರೇಯೋಭಿವೃದ್ಧಿಯಲ್ಲಿ ತಮ್ಮ ಜೀವನವನ್ನು ಜೋಡಿಸಿಕೊಂಡಿದ್ದಾರೆ.

ನಮ್ಮಲ್ಲೂ ಅನೇಕ ಮಂದಿಗೆ 'ನಮ್ಮ ದೇಶಕ್ಕೆ ಏನಾದರು ಮಾಡಬೇಕು' ಎಂಬ ಹಂಬಲ ಇರುತ್ತೆ. ಆದರೆ ಅದಕ್ಕೆ ಬೇಕಾದ ಸರಿಯಾದ ಪ್ರೇರಣೆ ಸಿಕ್ಕಿರುವುದಿಲ್ಲ. ಅದಕ್ಕೆ ಬೇಕಾದ 'ಸಾಧನ' ಸಿಕ್ಕಿರುವುದಿಲ್ಲ. ಈ ಕಾರಣಗಳಿಗೆ ಕೆಲವು ಉತ್ತಮ ಕಾರ್ಯಕ್ರಮಗಳು, ಕೆಲವು ಮಾಹಿತಿಗಳು ಪ್ರೇರಕಶಕ್ತಿಯಾಗಿ ಕೆಲಸ ಮಾಡಬಲ್ಲವು. ಬರುವ ಶನಿವಾರ 23ರಂದು ಸಂಜೆ 6 ಗಂಟೆಗೆ 'ವನವಾಸಿ ಕಲ್ಯಾಣ'ದ ಸಂಸ್ಥಾಪನಾ ದಿನದ ಪ್ರಯುಕ್ತ ಒಂದು ಸಣ್ಣ ಕಾರ್ಯಕ್ರಮ ಯೋಜನೆಯಾಗಿದೆ. ನಿಮಗೆ ಆದರದ ಸ್ವಾಗತ.

ಸ್ಥಳ: 'ಶಾಸ್ವತಿ' ಸಭಾಂಗಣ
ಎನ್ ಎಂ ಕೆ ಆರ್ ವಿ ಮಹಿಳಾ ಕಾಲೇಜ್
ಜಯನಗರ ಮೂರನೆ ಬ್ಲಾಕ್
ಬೆಂಗಳೂರು
ಸಮಯ : ಸಂಜೆ 6 ಗಂಟೆಗೆ

'ವನವಾಸಿ ಕಲ್ಯಾಣ'ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಲು ಭೇಟಿ ಕೊಡಿ ಅಂತರ್ಜಾಲ ವಿಳಾಸ 'ವನವಾಸಿ ಕಲ್ಯಾಣ'ದ ಅಂತರ್ಜಾಲ ವಿಳಾಸ

No comments:

Post a Comment