ಧುರ್ಯೋಧನನ ಆತಿಥ್ಯವನ್ನು ಸ್ವೀಕರಿಸಿದ ದೂರ್ವಾಸರು ದುರ್ಯೋಧನನಿಗೆ ವರ ಕೇಳಲು ಹೇಳಿದಾಗ ಅವನು ಕೇಳಿದ್ದು ದ್ರೌಪದಿಯ ಊಟವಾದ ನಂತರ ಅವರ ಮನೆಗೆ ಊಟಕ್ಕೆ ಹೋಗುವಂತೆ ಕೇಳುತ್ತಾನೆ . ಆ ಮೂಲಕ ಅವರಿಗೆ ಆತಿಥ್ಯ ಸಿಗದೆ ಶಾಪ ಸಿಗಲಿ ಎಂಬ ದುರುದ್ದೇಶದಿಂದ. ಅಕಸ್ಮಾತ್ ಆಗಲೇ ಯುಧ್ಧ ಗೆಲ್ಲಬೇಕು ಎಂದು ಕೇಳಿದ್ದರೆ ಕುರುಕ್ಷೇತ್ರವೇ ನಡೆಯುತ್ತಿರಲಿಲ್ಲ. ಆದರೆ 'ಇನ್ನೊಬ್ಬರಿಗೆ ಕೆಟ್ಟದಾಗಲಿ' ಎಂಬ ನಕಾರಾತ್ಮಕ ಧೋರಣೆಯಿಂದ ಕೂಡಿದ ದುರ್ಯೋಧನ ನಾಶವನ್ನು ಹೊಂದಿದ ಎಂಬ ಕಥೆಯನ್ನು ಕೇಳಿದ್ದೆವು. ಆದರೆ ಈಗಲೂ ಅದು ಎಷ್ಟು ಪ್ರಸ್ತುತ ಎಂದೆನಿಸುತ್ತಿದೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಆರೆಸ್ಸಸ್, ವಿಹೆಚ್ ಪಿ , ಭಜರಂಗದಳ ಮುಂತಾದ ಹಿಂದೂ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ವಿರೋಧೀ ಶಕ್ತಿಗಳು ಆ ಮೂಲಕ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತರುವ ಯೋಜನೆ ಹಾಕಿಕೊಂಡಿರುವುದು ಗೋಚರಿಸುತ್ತಿದೆ. ದೇಶದ ಅಭಿವೃಧ್ಧಿಯ ಉತ್ಕಟ ಆದರ್ಶ ಹೊಂದಿರುವ ಮೋದಿಯವರ 'ಮೋಡಿ'ಯನ್ನು ಸಹಿಸಲು ಆಗದವರು ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುವ ವಾಮಮಾರ್ಗದಲ್ಲಿ ಸಾಗಿದ್ದಾರೆ.
ಆರೆಸ್ಸಸ್ ನ ಮೋಹನ್ ಜಿ ಭಾಗವತ್ ರವರು ಕೆಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಅಸೀಮಾನಂದರು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಅಪ'ಪ್ರಚಾರ' ಕೊಟ್ಟ ಬೆನ್ನಲ್ಲೇ ಸ್ವಾಮಿ ಅಸೀಮಾನಂದರೇ ಅದನ್ನು ಅಲ್ಲಗಳೆದಿದ್ದಾರೆ. ಇಂಥಹ ಅಪಪ್ರಚಾರದ ಹಿಂದೆ ಅಡಗಿರುವ ಪತ್ರಿಕೋದ್ಯಮದ ದುರ್ಬಳಕೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಇಡೀ ದೇಶದ ಜನತೆ ದೇಶದ ಸುದ್ದಿವಿಚಾರಗಳನ್ನು ತಿಳಿಯಲು ಮಾಧ್ಯಮವನ್ನೇ ನಂಬಿರುವಾಗ ಸತ್ಯಕ್ಕೆ ದೂರವಾದ ವಿಚಾರಗಳನ್ನು ದೇಶದಲ್ಲಿ ಹರಡುವುದು ಅಕ್ಷಮ್ಯ ಅಪರಾಧವಾಗಿ ಪರಿಗಣಿಸಿ ಘೋರ ಶಿಕ್ಷೆಗೆ ಅರ್ಹವಾಗಿಸಬೇಕು. ಆಗ ಮಾತ್ರ ಮಾಧ್ಯಮ ಕ್ಷೇತ್ರವೂ ತನ್ನ ಕರ್ತವ್ಯವನ್ನು ಹೆಚ್ಚಿನ ಜವಾಬ್ದಾರಿಯುತವಾಗಿ ನಿರ್ವಹಿಸಲು ಅವಕಾಶವಾಗುತ್ತದೆ.
----------------------------------------------------------------------------------------------------------
ಈ ನನ್ನ ಮೇಲಿನ ಬರಹ ಫೆಬ್ರವರಿ ೧೦ ರ ಕನ್ನಪ್ರಭದಲ್ಲಿ ಪ್ರಕಟವಾಯಿತು. ಭಟ್ಟರ ತಂಡ ಕನ್ನಡಪ್ರಭಕ್ಕೆ ವಲಸೆ ಬಂದ ಮೇಲೆ ನನ್ನ ಮೊದಲ ಬರಹ. ಖುಷಿಯಾಯಿತು.
No comments:
Post a Comment