ನಾನು ಸಾಕಷ್ಟು ದಿನಗಳಿಂದ ಪತ್ರಿಕೆಗಳನ್ನ ಗಮನಿಸಿದ್ದೇನೆ. ಸುದ್ದಿ ಮಾಧ್ಯಮಗಳನ್ನ
ನೋಡಿದ್ದೇನೆ. ಅದು ಕಟ್ಟಡ ಉದ್ಘಾಟನೆ ಕಾರ್ಯಕ್ರಮವಾಗಿರಲಿ, ಗೌರವ ಸಮರ್ಪಣೆಯ ಕಾರ್ಯಕ್ರಮವಾಗಿರಲಿ,
ವಿಚಾರ ವೇದಿಕೆಯ ಕಾರ್ಯಕ್ರಮವಾಗಿರಲಿ, ಅನೌಪಚಾರಿಕ ಕಾರ್ಯಕ್ರಮವಾಗಿರಲಿ, ಸ್ನೇಹಿತರ ಭೇಟಿಯ ಕಾರ್ಯಕ್ರಮವಾಗಿರಲಿ,
ವಿಚಾರ ಸಂಕಿರಣವಾಗಿರಲಿ, ಮಾಧ್ಯಮದವರು ಯಾರಾದರೂ ಇದ್ದರೆ
ಸಾಕು ಇವರು ಮಾತಾಡುವುದು ಮಾತ್ರ ಒಂದೇ ವಿಷಯ.
ಮೊನ್ನೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ರವರ 121ನೆಯ
ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ದ ವಿಶ್ವ
ವಿಖ್ಯಾತ ವಿಚಾರ(ವಿಲ್ಲದ)ವಾದಿ ಪ್ರೊ. ಜಿ.ಕೆ.ಗೋವಿಂದರಾವ್
ರವರು ರವಿಶಂಕರ್ ಗುರೂಜಿಯವರ ಬಗ್ಗೆ ಸಿಕ್ಕಾಪಟ್ಟೆ ಮಾತಾಡಿ ಸುಸ್ತಾದದ್ದು ಅಂತರ್ಜಾಲದಲ್ಲೂ ಹರಿದಾಡಿತು.
ಅವರು ಪ್ರೊಫೆಸರ್ ಅಲ್ವಾ, ತುಂಬಾ ಬುದ್ದಿವಂತರು. ಓದುಗರ ಪ್ರಕ್ರಿಯೆಗಳನ್ನ ನೋಡಲು ಕೂಡ ಹೋಗುವುದಿಲ್ಲ..!
ಕಳೆದ ಜನವರಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಬರಗೂರು
ರಾಮಚಂದ್ರಪ್ಪನವರು, ಸಾಹಿತಿ ಮರುಳಸಿದ್ದಪ್ಪನವರು, ಭೈರಪ್ಪನವರ ಹಾಗು ಸಂಶೋಧಕ ಚಿದಾನಂದಮೂರ್ತಿಯವರ
ವಿರುಧ್ಧ ಮಾತಾಡಿದ್ದರು.
ನಮ್ಮ ರಾಜ್ಯದ ಸಾಹಿತಿ ಮರುಳಸಿದ್ದಪ್ಪನವರು, ಪ್ರೊಫೆಸರ್ ಜಿ.ಕೆ.ಗೋವಿಂದರಾವ್,
ಡಾ.ಯು. ಆರ್. ಅನಂತಮೂರ್ತಿ, ಡಾ.ಬರಗೂರು ರಾಮಚಂದ್ರಪ್ಪ, ಸಾಹಿತಿ ಚಂದ್ರಶೇಖರ ಪಾಟೀಲರು ಇನ್ನು ಮುಂತಾದ
ಅಸಾಧಾರಣ ಪ್ರತಿಭೆಗಳು ಯಾವ ಕಾರ್ಯಕ್ರಮಗಳಲ್ಲಾಗಲೀ , ಯಾವ ವೇದಿಕೆಗಳಲ್ಲಾಗಲೀ ಮಾತನಾಡುವುದು ಮಾತ್ರ
ಸಂಘಪರಿವಾರದ ವಿರುದ್ಧ, ಇಲ್ಲವೇ ಮಠಮಂದಿರಗಳ ಬಗ್ಗೆ, ಇಲ್ಲವೇ ಸಾಧುಸಂತರ ವಿರುದ್ಧ ಇಲ್ಲವೇ ಭೈರಪ್ಪನವರ
ವಿರುದ್ಧ, ಇಲ್ಲವೇ ಸಂಶೋಧಕ ಚಿದಾನನದಮೂರ್ತಿಯವರ ವಿರುದ್ಧ. ಒಟ್ಟಿನಲ್ಲಿ
ಹಿಂದೂಸಮಾಜದ ವಿರುದ್ಧ.
ಯಾವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಶ್ರೋತೃಗಳು ಯಾರು ಎಂಬ
ಅರಿವೂ ಇಲ್ಲದೆ ಎಲ್ಲಿ ಹೋದರೂ ತಮ್ಮ ಅಸೂಯೆಯನ್ನು ಹೊರಹಾಕುವ ಈ ವಿಚಾರವಾದಿಗಳಿಗೇ ವಿಚಾರಕ್ಕೆ ಬರ
ಬಂದಿದೆ ಎಂದರೆ ಯಾರಿಗೆ ತಾನೇ ಪಾಪ ಎನಿಸುವುದಿಲ್ಲ?
ಇದನ್ನೇ ಹೊಟ್ಟೆಪಾಡನ್ನಾಗಿ ಮಾಡಿಕೊಂಡಂತಿರುವ ಇವರ ಮನಸ್ಸಿಗೆ ಕವಿದಿರುವ
ದ್ವೇಷದ, ಅಸೂಯೆಯ ಕಾರ್ಮೋಡ ಆದಷ್ಟು ಬೇಗ ಸರಿದು ಪ್ರಾಮಾಣಿಕರಾಗಲಿ ಎಂದು ಆ ದೇವರನ್ನು ರಾಜ್ಯದ ಜನರ
ಪರವಾಗಿ ಪ್ರಾರ್ಥಿಸುವೆ.
http://kannada.oneindia.in/response/2012/0424-progressive-thinkers-anti-hinduism-aid0038.html
ReplyDeleteThis got published in kannada.oneindia.in on April 24th, 2012.
ಬುದ್ಧಿ(ಇಲ್ಲದ)ಜೀವಿಗಳು.
ReplyDelete