ಆ ದಿನ ನಾನು ಒದಾವರದ ಕೋಟೆಯನ್ನು ನೋಡಿಕೊಂಡು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಕೋಟೆಯ ಸ್ಥಳದಿಂದ ಸ್ವಲ್ಪ ಕೆಳಗೆ ಹೋದರೆ ಜಪಾನಿನ ಶಿಂಟೊ ಜನಾಂಗದವರ ದೇವಸ್ಥಾನ (ಶ್ರೈನ್) ಇತ್ತು. ಇಲ್ಲಿಯ ಕ್ರೈಸ್ತೇತರ ಧಾರ್ಮಿಕ ಸ್ಥಳಗಳು ಹೇಗಿರುತ್ತೆ ಅಂತ ನೋಡುವ ಕುತೂಹಲ ಇತ್ತು. ಅದನ್ನು ಒಮ್ಮೆ ನೋಡಣ ಅಂತ ಹೊರಟೆ. ಶ್ರೈನ್ ನ ಮುಂದೆ ಹೋಗಿ ನಿಂತಾಗ ಯಾರೂ ಹೋಗುತ್ತಿದ್ದ ಹಾಗೆ ಅನ್ನಿಸಲಿಲ್ಲ. ನಿರ್ಜನ ಅಂತ ಅನ್ನಿಸಿತು. ವಾಪಸ್ ಹೊರಡುವ ಅನ್ನುವಷ್ಟರಲ್ಲಿ ದೇವಸ್ಥಾನದ ಒಳಕ್ಕೆ ಯಾರೋ ಹೋಗುತ್ತಿರುವ ಹಾಗೆ ಅನ್ನಿಸಿತು. ಅದೂ ವಿಶೇಷ ಬಾಗಿಲಿನಿಂದ. ಆ ವಿಶೇಷ ಬಾಗಿಲಿನ ಪ್ರವೇಶವನ್ನು ಹುಡುಕುತ್ತ ಹೊರಟಾಗ, ಮಂದಿರದ ಎಡಭಾಗಕ್ಕೆ ಇದ್ದ ಒಂದು ಕಟ್ಟಡದಿಂದ ಮಂದಿರಕ್ಕೆ ವಿಶೇಷ 'ಫ್ಲೈ ಓವರ್ 'ನ ಮೂಲಕ ಶ್ರೈನ್ ನ ಒಳಭಾಗಕ್ಕೆ ಹೋಗಲು ಇದ್ದ ದಾರಿ ಕಾಣಿಸಿತು.
ಆ ಕಟ್ಟಡಕ್ಕೆ ಪ್ರವೇಶಿಸಿದರೆ ಪೂರ್ಣ ಶ್ವೇತವಸ್ತ್ರಧಾರಿಗಳಾದ ಕೆಲವರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದರು. ನಾನು ಅಲ್ಲಿದ್ದವರಲ್ಲೊಬ್ಬರಿಗೆ ಒಳಗೆ ಹೋಗಲು ಅವಕಾಶ ಕೇಳಿದೆ. ಇಂಗ್ಲಿಶ್ ಬರದ ಅವರು, ಜಪಾನೀಸ್ ಬರದ ನಾನು, ಭಾಷೆಯ ಸಮಸ್ಯೆಯಾಯಿತು. ಹೇಗೆ ಅರ್ಥ ಮಾಡಿಸುವುದು ಎಂದು ಕಷ್ಟ ಪಡುತ್ತಿರುವಾಗಲೇ ಒಬ್ಬಳು ಹುಡುಗಿ ಬಂದಳು. ನಮ್ಮ ಸಂಭಾಷಣೆಯನ್ನು ನೋಡಿ ಅವಳಿಗೆ ಅರಿವಾಗಿರಬೇಕು, ತಕ್ಷಣ ಬಂದು 'ನನಗೆ ಇಂಗ್ಲಿಷ್ ಸ್ವಲ್ಪ ಸ್ವಲ್ಪ ಬರುತ್ತೆ' ಅಂತ ಹೇಳಿ ಸಹಾಯಕ್ಕೆ ಬಂದಳು.
ಆ ಕಟ್ಟಡಕ್ಕೆ ಪ್ರವೇಶಿಸಿದರೆ ಪೂರ್ಣ ಶ್ವೇತವಸ್ತ್ರಧಾರಿಗಳಾದ ಕೆಲವರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದರು. ನಾನು ಅಲ್ಲಿದ್ದವರಲ್ಲೊಬ್ಬರಿಗೆ ಒಳಗೆ ಹೋಗಲು ಅವಕಾಶ ಕೇಳಿದೆ. ಇಂಗ್ಲಿಶ್ ಬರದ ಅವರು, ಜಪಾನೀಸ್ ಬರದ ನಾನು, ಭಾಷೆಯ ಸಮಸ್ಯೆಯಾಯಿತು. ಹೇಗೆ ಅರ್ಥ ಮಾಡಿಸುವುದು ಎಂದು ಕಷ್ಟ ಪಡುತ್ತಿರುವಾಗಲೇ ಒಬ್ಬಳು ಹುಡುಗಿ ಬಂದಳು. ನಮ್ಮ ಸಂಭಾಷಣೆಯನ್ನು ನೋಡಿ ಅವಳಿಗೆ ಅರಿವಾಗಿರಬೇಕು, ತಕ್ಷಣ ಬಂದು 'ನನಗೆ ಇಂಗ್ಲಿಷ್ ಸ್ವಲ್ಪ ಸ್ವಲ್ಪ ಬರುತ್ತೆ' ಅಂತ ಹೇಳಿ ಸಹಾಯಕ್ಕೆ ಬಂದಳು.
ನಾನು ಭಾರತದಿಂದ ಬಂದಿದ್ದೇನೆ, ನನ್ನ ಕಂಪನಿಯಿಂದ ೨ ತಿಂಗಳಿಗೆ ಇಲ್ಲಿಗೆ ಬಂದಿದ್ದೇನೆ, ಇಲ್ಲಿನ ದೇವಸ್ಥಾನವನ್ನ ನೋಡಬೇಕೆಂದು ಬಂದಿದ್ದೇನೆ ಎಂಬ ವಿವರಗಳನ್ನು ಕೊಟ್ಟೆ. ಅವಳೂ ಸಹ ಅವರಿಗೆ ತಿಳಿಸಿದಳು. 'ನೀವು ನಮ್ಮ ದೇವರನ್ನು ನಂಬುತ್ತೀರ? ನೀವು ನಮ್ಮ ದೇವರನ್ನು ಪೂಜಿಸಲು ಇಷ್ಟ ಪಡುತ್ತೀರ?' ಎಂಬ ಅವರ ಕೆಲವು ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರ ಕೊಟ್ಟ ನಂತರವೇ ನನ್ನನ್ನು ಒಳಗೆ ಬಿಟ್ಟಿದ್ದು.
ಒಳಗೆ ಹೋಗಿ ನೋಡಿದಾಗ ತಕ್ಷಣ ನನಗನ್ನಿಸಿದ್ದು ನಮ್ಮ ಕೆಲವು ಹಿಂದೂ ಪೂಜಾ ಪದ್ದತಿಗಳ ಜೊತೆಗಿನ ಸಾಮ್ಯತೆ. ಕೆಲವು ಅಲಂಕಾರಗಳು, ನೆವೈದ್ಯ, ಕಾಣಿಕೆ, ಪ್ರಸಾದ ಹಂಚಿಕೆಯ ತರಹ ಅವರಲ್ಲೂ ಕೆಲ ಪದ್ದತಿಗಳು ಇರುವುದನ್ನು ಕೇಳಿ ಆಶ್ಚರ್ಯವಾಯಿತು. ಜೊತೆಗೆ ನಮ್ಮ ಹಿಂದೂ ಧರ್ಮದ ಪ್ರಭಾವ ಎಲ್ಲಿಲ್ಲಿದೆ ಎಂಬುದನ್ನು ನೋಡಿ ಹೆಮ್ಮೆಯಾಯಿತು ಸಹ. ನಾನು ನಮ್ಮ ಹಿಂದೂ ಪದ್ದತಿಗಳಲ್ಲೂ ಹೀಗೆ ಇದೆ ಎಂದು ಕೆಲವು ಉದಾಹರಣೆಗಳನ್ನು ನೀಡಿದೆ. ನಂತರ ನಾವು ಪ್ರಾರ್ಥನೆಯನ್ನು ಹೇಗೆ ಮಾಡ್ತೇವೆ ಎಂದು ಕೆಲವು ಸಂಸ್ಕೃತ ಶ್ಲೋಕಗಳನ್ನು ಹೇಳಿ ತೋರಿಸಿದೆ. ಆಶ್ಚರ್ಯದಿಂದ ಕೇಳಿದ ಅವರು ನಾನು ಹೇಳಿದ ಶ್ಲೋಕದ ಅರ್ಥ ಹಾಗೂ ಸಂಸ್ಕೃತ ಭಾಷೆಯ ಬಗ್ಗೆ ಕೇಳಿದರು. ನಂತರ ನಮ್ಮ ಹಿಂದೂ ಪದ್ದತಿಯ ಪ್ರಕಾರವೇ ನಮಸ್ಕರಿಸಿ, ಎಲ್ಲರಿಗು ನನ್ನ ಧನ್ಯವಾದಗಳನ್ನು ಅರ್ಪಿಸಿ ನಾನು ಹೊರಬಂದೆ.
ನಮಗೆ ಸಹಾಯ ಮಾಡಿದ 'ದುಭಾಷಿ'ಯನ್ನು ವಿಚಾರಿಸಿದಾಗ ಅವಳು ಆಸ್ಟ್ರೇಲಿಯಾ ದಲ್ಲಿ ೨ ವರ್ಷಗಳ ಕಾಲ ಓದಿದ ಕಾರಣಕ್ಕೆ ಇಂಗ್ಲಿಷ್ ಭಾಷೆಯ ಪರಿಚಯವಾಗಿದ್ದು ತಿಳಿದುಬಂತು. ಅವಳಿಗೂ ನಾನು ಥ್ಯಾಂಕ್ಸ್ ಹೇಳಿದೆ.
ಬರೇ ಬುಲೆಟ್ ಟ್ರೈನಿನ ಅನುಭವಕ್ಕೊಸ್ಕರ ಒದಾವರದ ಕೋಟೆ ನೋಡಬೇಕೆಂದು ಬಂದು ಒಂದು ವಿಶೇಷ ಅನುಭವಕ್ಕೆ ಪಾತ್ರನಾದೆನಲ್ಲ ಎಂದು ಖುಷಿಯಾಗುತ್ತಿತ್ತು. ನಿಜ ಹೇಳಬೇಕೆಂದರೆ ಕೋಟೆ ನೋಡಿದ್ದಕಿಂತ ಶ್ರೈನ್ ನೋಡಿದ, ಅಲ್ಲಾದಂತಹ ಅನುಭವ ಮರೆಯಲಾರದ್ದು.