ದೇಶದ್ರೋಹಿ ಕೆಲಸಗಳನ್ನು ಮಾಡಿದರೂ ಸೌಖ್ಯವಾಗಿ ಇರಲು ಸಾಧ್ಯವಿರುವ ದೇಶ ಎಂದರೆ ಭಾರತ ಒಂದೇ ಎಂದು ಯಾರಿಗಾದರೂ ಅನ್ನಿಸದಿದ್ದರೆ ಆಶ್ಚರ್ಯ ಪಡಬೇಕು...!
ಭಾರತದ ಮೇಲೆ ಆಕ್ರಮಣ ಮಾಡಿದವರೂ ಭಾರತದಲ್ಲಿ ಆರಾಮಾಗಿ ರಬಹುದು, ಭಾರತ ವನ್ನು ಕೊಳ್ಳೆ ಹೊಡೆದವರೂ ಭಾರತದಲ್ಲಿ ಆರಾಮಾಗಿ ರಬಹುದು, ಭಾರತ ದ ವಿರುದ್ಧ ಹೇಳಿಕೆ ನೀಡಿದರೂ ಅವರಿಗೆ ಭವ್ಯ ಸ್ವಾಗತ ಸಿಗುತ್ತೆ ನಮ್ಮ ಈ ಭಾರತದಲ್ಲಿ...! ಕಸಬ್, ಅಫ್ಜಲ್ ಗುರು ಅಂತಹವರು ಹುಲುಸಾಗಿರುವಾಗ ನಾನು ಯಾರಿಗೆ ಕಮ್ಮಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕಿ ಅರುಂಧತಿ ರಾಯ್ ತಮ್ಮ ಹೆಜ್ಜೆ ಇಟ್ಟಿದ್ದಾರೆ, ಅಷ್ಟೇ ಅಲ್ಲ, ಮುಂದೆ ಇನ್ನು ದೊಡ್ಡ ದೊಡ್ಡ ಹೆಜ್ಜೆಯನ್ನು ಇಡಲಿದ್ದಾರೆ ಎಂದು ಸಾಬೀತು ಮಾಡಿದ್ದಾರೆ. ಇಂತಹ ಹೆಣ್ಣು(?) ಮಕ್ಕಳನ್ನು ಪಡೆದ ಭಾರತ ಮಾತೆ ನೀನೆ ಧನ್ಯ...!!!!!
ಪ್ರಸಿದ್ಧಿಯನ್ನು ಪಡೆಯುವ ಸಲುವಾಗಿ ಒಂದು ಸೂತ್ರವಿದೆ. ನಿಮಗೆ ಅಂತಾರಾಷ್ಟ್ರೀಯ ಖ್ಯಾತಿ ಏನಾದರು ಬೇಕಾದಲ್ಲಿ ಭಾರತದ ವಿರುದ್ಧ ಮಾತೆತ್ತಿ ಅಥವಾ ಪುಸ್ತಕ ಬರೆಯಿರಿ ಅಥವಾ ನಮ್ಮ ಈ ಆಧುನಿಕ ಭಾರತದ ಒಳಗೆ ನಿಮಗೇನಾದರೂ ಪ್ರಸಿದ್ಧಿ ಬೇಕಾದಲ್ಲಿ ಹಿಂದೂಗಳ ವಿರುದ್ಧ ದನಿಯೆತ್ತಿ ಎಂದು. ತಕ್ಷಣದಲ್ಲಿ ಪ್ರಸಿದ್ಧಿ ಪಡೆದ ಬಹುತೇಕ ಎಲ್ಲ ಪಿಪಾಸುಗಳೂ ಇದೆ ಗುಂಪಿಗೆ ಸೇರಿದವರಾಗಿದ್ದಾರೆ, ಪರೀಕ್ಷಿಸಿ ನೋಡಿ.
ಸಂವಿಧಾನದ ೩೭೦ ನೆ ವಿಧಿಯ ಕಾರಣದಿಂದಾಗಿ ಇಡೀ ಕಾಶ್ಮೀರ ಬಹುತೇಕ ಪರಕೀಯವಾಗಿಯೇ ಉಳಿದಿರುವಂತಹ ಪರಿಸ್ಥಿತಿಯಲ್ಲಿ ಭಾರತೀಯ ನಾರಿ ಅರುಂಧತಿ ರಾಯ್ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದರೂ, ದೇಶದ್ರೋಹದಾಪಾದನೆಯಡಿ ಬಂಧಿಸುವ ಅವಕಾಶವಿದ್ದರೂ, 'ಇಂತಹವರು ಮುಂದೊಂದು ದಿನ ನಮಗೂ ಸಹಾಯಕ್ಕೆ ಬರಬಹುದು' ಎಂಬ ದೂರಾಲೋಚನೆ (!)ಯಡಿ ಕೇಂದ್ರ ಸರಕಾರ ಸಮಸ್ಯೆಯನ್ನು ಹೆಚ್ಚಾಗಿಸುವುದು ಬೇಡ ಎಂಬ ಜಾಣ್ಮೆಯಲ್ಲಿ ಪರಿಸ್ಥಿಯನ್ನು ನಿಭಾಯಿಸುತ್ತಿದೆ!
ಎಲ್ಲ ಪಕ್ಷಗಳೂ, ಎಲ್ಲ ರಾಜಕಾರಣಿಗಳೂ ರಾಷ್ಟ್ರಹಿತದ ವಿಷಯದಲ್ಲಿ ಎಂದಿಗೆ ಒಂದಾಗುವರೋ, ಅಂದಿನಿಂದ ಹೆಚ್ಚುಗೊಳ್ಳುವ ಭಾರತದ ಅಭ್ಯುದಯದ ವೇಗವನ್ನು ನಿಯಂತ್ರಿಸಲೂ ಯಾವ ಅಂತಾರಾಷ್ಟ್ರೀಯ ತಂತ್ರಗಳಿಂದಲೂ ಸಾಧ್ಯವಿಲ್ಲ.